Objectives
Objectives
Purpose and direction
A clear path for learning, service and cultural continuity.
ಮಂಗಳೂರು ಹೋಬಳಿಯ ಪುತ್ತೂರು ಪರಿಸರದ ಪ್ರಸಿದ್ಧ ವೈದಿಕ ವಿದ್ವಾಂಸರಾಗಿದ್ದ ದಿವಂಗತ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟರ ಸ್ಮರಣಾರ್ಥ ದಿನಾಂಕ 7-11-1993ರಂದು ಸ್ಥಾಪಿತವಾದ ನಮ್ಮ ಸಂಪ್ರತಿಷ್ಠಾನವು ಈ ಕೆಳಗಿನ ಧ್ಯೇಯೋದ್ದೇಶಗಳನ್ನು ಮುಖ್ಯವಾಗಿ ಇಟ್ಟುಕೊಂಡಿದೆ.
- ವೈದಿಕ-ಲೌಕಿಕ ಸಾಹಿತ್ಯಗಳನ್ನೊಳಗೊಂಡ ಸಂಸ್ಕೃತಭಾಷಾಸಂಬಂಧಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸುವುದು ಆ ಮೂಲಕ ಸಂಸ್ಕೃತಸಂಬಂಧಿ ಶಿಕ್ಷಣವನ್ನು ಊರ್ಜಿತಗೊಳಿಸಿ ಪ್ರಚಾರಪಡಿಸುವುದು,
- ಶಿಕ್ಷಣಾಸಕ್ತಿಯ ಗ್ರಂಥಗಳನ್ನು ಸಂಚಿಕೆಗಳನ್ನು ಪ್ರಕಟಿಸುವುದು.
- ಶಿಕ್ಷಣಪ್ರಸಾರದೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ನೀಡುವುದು.
- ಸಮಾಜದ ಬೌದ್ಧಿಕ, ದೈಹಿಕ ಹಾಗೂ ಸಾಂಸ್ಕೃತಿಕ ಮುನ್ನಡೆಯನ್ನು ಸಾಧಿಸುವುದು.
- ತನ್ನ ಅಥವಾ ಇತರ ಸಮಾನಾಭಿರುಚಿಯ ಸಂಸ್ಥೆಗಳ ಮೂಲಕ ಶಿಕ್ಷಣ, ಸಂಸ್ಕೃತಿ ಇಂತಹವನ್ನು ಪ್ರಚಾರಗೊಳಿಸಲು ಉಪಯುಕ್ತವಾಗುವ ನಿಧಿಗಳನ್ನು ಸ್ಥಾಪಿಸಿ ಬೆಳೆಸುವುದು.
- ವಿದ್ಯಾರ್ಥಿಗಳಿಗೆ ಆಹಾರ, ವಸತಿ, ಇಂತಹವನ್ನು ಒದಗಿಸಲು ಉಪಯುಕ್ತವಾಗುವಂತೆ ನಿಧಿಗಳನ್ನು ಸ್ಥಾಪಿಸುವುದು.
- ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮೊದಲಾದವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಮುನ್ನಡೆಯನ್ನು ಸಾಧಿಸುವುದು.
- ಸಂಸ್ಕೃತಸಾಹಿತ್ಯಕ್ಕೆ ವಿಶೇಷ ಅವಧಾರಣೆ ನೀಡುವಂತಹ ಸಭೆ, ಸಮ್ಮೇಳನ, ಉಪನ್ಯಾಸ, ಪ್ರಾತ್ಯಕ್ಷಿಕೆ ಮೊದಲಾದುವನ್ನು ಏರ್ಪಡಿಸುವುದು; ಸಾಧ್ಯವಿದ್ದಲ್ಲಿ ಇಂತಹವನ್ನು ಸಂಸ್ಕೃತೇತರ ವಿಷಯಗಳಿಗೆ ವಿಸ್ತರಿಸುವುದು.
- ಭಾರತೀಯತೆ ಹಾಗೂ ತತ್ಸಂಬಂಧಿ ವಿಷಯಗಳ ಕುರಿತು ಸಂಗ್ರಹ, ಸಂಶೋಧನೆ, ಪ್ರಸಾರ- ಇಂತಹವನ್ನು ಕೈಗೊಳ್ಳುವುದು.
- ವಿದ್ಯಾರ್ಥಿಗಳ, ಮುಖ್ಯವಾಗಿ ಸಂಶೋಧನ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಗ್ರಂಥಾಲಯ, ಅಧ್ಯಯನ ಕೇಂದ್ರ ಮೊದಲಾದುವನ್ನು ಸ್ಥಾಪಿಸುವುದು.
- ಮಾನವೀಯತೆ, ವಿಜ್ಞಾನ ಅಥವಾ ಯಾವುದೇ ವೈಚಾರಿಕ ವಿಭಾಗದಲ್ಲಿ ವಿಶಿಷ್ಟ ಕೊಡುಗೆ ಮಾಡಿದವರನ್ನು ಗುರುತಿಸಿ ಗೌರವಿಸುವುದು.
- ಆರೋಗ್ಯದಂತಹ ಸಾಮಾಜಿಕ ವಿಷಯಗಳನ್ನು ಕೇಂದ್ರವಾಗಿರಿಸಿ ಜ್ಞಾನಪ್ರಸಾರ, ಆರ್ಥಿಕ ಸಹಾಯ ಇಂತಹವನ್ನು ಒದಗಿಸುವುದು.
- ಸಂಪ್ರತಿಷ್ಠಾನಕ್ಕೆ ಸಂಬಂಧಿಸಿದ ನಿಧಿಯ ಯಾವುದೇ ಅಂಶವು ಸಂಪ್ರತಿಷ್ಠಾನದ ಉದ್ದೇಶದ ಹೊರತು ವೈಯಕ್ತಿಕ ಉದ್ದೇಶಗಳಿಗೆ ಎಂದೂ ಉಪಯೋಗಹೊಂದದಂತೆ ಎಚ್ಚರವಹಿಸುವುದು.
- ಮೇಲೆ ತೋರಿಸಲಾದ ರೂಪರೇಖೆಗಳ ಅಂಗವಾಗಿ ನಡೆಯಬಹುದಾದ ಯಾವುದೇ ಕಾರ್ಯಕ್ರಮಗಳನ್ನು ಸಂದರ್ಭೋಚಿತವಾಗಿ ರೂಪಿಸಿ ಕಾರ್ಯಗತಗೊಳಿಸುವುದು.